ಕಂಡಿದ್ದು ಕೇಳಿದ್ದು
Jun 22, 2007
ನಮ್ಮ ನಿತ್ಯ ದಿನ ಜೀವನದಲ್ಲಿ ತಮಾಷೆಯಾಗಿರುವಂತಹ, ಮುಜುಗರ ನೀಡುವಂತಹ ಸನ್ನಿವೇಶಗಳು ಬಹಳಷ್ಟು. ಅದು ನಡೆದು ಎಷ್ಟೋ ದಿನಗಳ ನಂತರ ಅದನ್ನ ಜ್ಞಾಪಿಸಿಕೊಂಡರೆ ಹಿಂದಿನ ದಿನಗಳ ನೆನಪುಗಳು ಅಲೆ-ಅಲೆಯಾಗಿ ಬರುತ್ತವೆ.
ಕಳೆದು ಹೋದ ಘಟನೆಗಳ, ಎಲ್ಲೋ ಕೇಳಿದ, ಕಂಡ, ನಗೆ ತರಿಸುವ ಸನ್ನಿವೇಶಗಳನ್ನು ಹಂಚಿಕೊಳ್ಳುವ ಪ್ರಯತ್ನ ಇದು. ನಿಮ್ಮ ಜೀವನದಲ್ಲೂ ಈ ರೀತಿಯ ಘಟನೆಗಳು ನಡೆದಿದ್ದರೆ, ಬನ್ನಿ ನೀವು ಹಂಚಿಕೊಳ್ಳಿ.
ಈ ಘಟನೆ ನನ್ನ ಗೆಳೆಯ/ಹಳೆಯ ಕಂಪೆನಿ ಸಹೋದ್ಯೋಗಿ ವಿಕ್ರಮ್ ಹೇಳಿದ್ದು. ಅವನ ಶಾಲಾ ದಿನಗಳಲ್ಲಿ ನಡೆದ ಘಟನೆ - ೫-೬ನೇ ತರಗತಿಯಿರಬಹುದು. ಒಂದು ಸಂಜೆ ಶಾಲೆಯಿಂದ ಹಿಂದಿರುವಾಗ ಅವನು ಮತ್ತು ಗೆಳೆಯರ ಗುಂಪು ಮನೆ ದೂರವಿದ್ದುದರಿಂದ ಒಂದು ಕಾರಿಗೆ ಕೈ ತೋರಿಸಿ ಲಿಫ಼್ಟ್ ಕೇಳಿದರು. ಇವರು ಸುಮಾರು ೬-೭ ಹುಡುಗರಿದ್ದರು. ಕಾರಿನವರು ಗಾಡಿ ನಿಲ್ಲಿಸಿ ಎಲ್ಲರನ್ನೂ ಹತ್ತಿಸಿಕೊಂಡು ಹೊರಟರು. ಸ್ವಲ್ಪ ದೂರ ಹೋದ ಮೇಲೆ ಕಾರಿನವರು ಸುಮ್ಮನೆ ಎಚ್ಚರಿಸಲೋಸುಗ ಕೇಳಿದರು "ಲೋ ಮಕ್ಕಳ್ರಾ, ನಿಮಗೆ ಕಿಡ್ನಾಪ್ ಅಂದ್ರೆ ಗೊತ್ತಾ?". ಅದಕ್ಕೆ ಒಬ್ಬ ತಟಕ್ಕನೆ ಪ್ರತಿಕ್ರಿಯಿಸಿದ "ಅಂಕಲ್, ನಿಮಗೆ ಹೈಜಾಕ್ ಅಂದ್ರೆ ಗೊತ್ತಾ?". ಮುಂದೆ ಅವರೆಲ್ಲರು ಇಳಿಯುವ ತನಕ ಕಾರಿನವರು ಗಪ್‍ಚಿಪ್. :)
Posted by Prashanth M 6:13 PM
ಕೈಪಿಡಿ: ಕಂಡಿದ್ದು ಕೇಳಿದ್ದು, ನೆನಪುಗಳು
ಮಜಾ ಬುನ್ತು.