ನಾನೇಕೆ ಬರೆಯಲಿ?

ನಾನೇಕೆ ಬರೆದು ಹೇಳಬೇಕು ನಿನಗೆ?

ನಿನಗೆ ತಿಳಿಯಹೇಳಲು ...
ನನಗೆ ಬರೆಯುವುದೇ ದಾರಿಯೆ?

ಎನ್ನ ಎದೆಯಾಳದ ಭಾವವ ತಿಳಿಯದಿರಲು
ನೀನೇನು ಕಲ್ಲಿನ ಮೂರ್ತಿಯೆ?

ತಾಯಿ ತನ್ನ ಮಗುವಿಗೆ ಪ್ರೀತಿಯನ್ನು ಬರೆದು ತಿಳಿಸುವಳೆ?
ಇಲ್ಲ. ಆಕೆ ತನ್ನ ಭಾವವನ್ನು ಮಮತೆಯನುಣಿಸಿ ಪ್ರಕಟಿಸುವಳು.

ದುಂಬಿಯೊಂದು ಹೂವಿಗೆ ಬರೆದು ತಿಳಿಸುತ್ತದೆಯೆ ತನ್ನ ಪ್ರೇಮವನ್ನು?
ಇಲ್ಲ. ಅದು ಬರಿಯ ಝೇಂಕಾರದಿಂದ ಪ್ರಕಟಿಸುತ್ತದೆ ತನ್ನ ಆಗಮನವನ್ನು.

ಬತ್ತಿಯು ಬೆಳಕಿಗೆ ಬರೆಯುವುದೇ ತನ್ನೊಲುಮೆ ಸಾರಲು?
ಇಲ್ಲ. ಅದು ತಾನೇ ಉರಿದು ಬೆಳಕಿನೊಡಗೂಡುವುದು!

ಹಾಗಾದರೆ ನಾನೇಕೆ ಬರೆಯಲಿ, ನನ್ನೊಲುಮೆ ತೋರಲು?
ನನಗೆ ಬರೆಯುವುದೊಂದೇ ದಾರಿಯೇ?

ನನ್ನ ಎದೆಯಾಳದ ಭಾವವ ತಿಳಿಯದಿರಲು
ನೀನೇನು ಕಲ್ಲಿನ ಮೂರ್ತಿಯೆ?

Inspiration : Rakesh's Hindi poem

Posted by Srik 3:42 PM 2 ಅನಿಸಿಕೆಗಳು  



ಕಂಡಿದ್ದು ಕೇಳಿದ್ದು ೩

ಆತ: ಏನೋ ತಲೇನಲ್ಲಿ ಇಷ್ಟೊಂದು ಬಿಳೀ ಕೂದಲು. ಬೇಗ ಮದುವೆ ಅಗಿಬಿಡೊ.

ಈತ: ಯಾಕೆ ಮದುವೆ ಆದ ತಕ್ಷಣ ಬಿಳಿ ಕೂದಲೆಲ್ಲ ಮತ್ತೆ ಕಪ್ಪಗಾಗಿಬಿಡತ್ತಾ? :p

Posted by Prashanth M 2:40 PM 1 ಅನಿಸಿಕೆಗಳು